CIC
ಕೇಂದ್ರ ಮಾಹಿತಿ ಆಯೋಗವು (CIC) :- ಮಾಹಿತಿ ಹಕ್ಕು ಕಾಯ್ದೆ-2005 ರ ಅಡಿಯಲ್ಲಿ ಸ್ಥಾಪಿಸಲಾದ ಉನ್ನತ ಸಂಸ್ಥೆಯಾಗಿದ್ದು, ನಾಗರಿಕರು ಕೇಳುವ ಮಾಹಿತಿಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಮನವಿಗಳನ್ನು ನಿರ್ವಹಿಸುತ್ತದೆ. ಇದು ನೇರವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಮಾಹಿತಿ ಹಕ್ಕು ಅಧಿನಿಯಮದ ಸರಿಯಾದ ಅನುಷ್ಠಾನವನ್ನು ಖಚಿತಪಡಿಸುತ್ತದೆ. • ಸ್ಥಾಪನೆ: ಮಾಹಿತಿ ಹಕ್ಕು ಕಾಯ್ದೆ, 2005 ರ ಅಡಿಯಲ್ಲಿ ಸ್ಥಾಪಿಸಲಾಗಿದೆ. • ಕರ್ತವ್ಯ: ಮಾಹಿತಿ ಹಕ್ಕು (RTI) ಅರ್ಜಿಗಳಿಗೆ ಸಂಬಂಧಿಸಿದ ದೂರುಗಳು, ಮೇಲ್ಮನವಿಗಳನ್ನು ಸ್ವೀಕರಿಸುವುದು ಮತ್ತು ಪರಿಹರಿಸುವುದು. • ಅಧಿಕಾರ: ಮಾಹಿತಿ ನಿರಾಕರಣೆ, ಅಪೂರ್ಣ ಮಾಹಿತಿ ಅಥವಾ ಮಾಹಿತಿ ನೀಡಲು ವಿಳಂಬದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದೆ. • ರಚನೆ: ಮುಖ್ಯ ಮಾಹಿತಿ ಆಯುಕ್ತರು (CIC) ಮತ್ತು ಮಾಹಿತಿ ಆಯುಕ್ತರನ್ನು ಒಳಗೊಂಡಿರುತ್ತದೆ. • ನೇಮಕಾತಿ: ಭಾರತದ ರಾಷ್ಟ್ರಪತಿಗಳು ಸಮಿತಿಯ ಶಿಫಾರಸಿನ ಮೇರೆಗೆ ಆಯುಕ್ತರನ್ನು ನೇಮಿಸುತ್ತಾರೆ.