SDA
ಕರ್ನಾಟಕದ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ಹುದ್ದೆಯು :- 12ನೇ ತರಗತಿ/ಪಿಯುಸಿ ಉತ್ತೀರ್ಣರಾದವರಿಗೆ (PUC/12th Pass) ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಉತ್ತಮ ಅವಕಾಶವಾಗಿದೆ. 18 ರಿಂದ 38 ವರ್ಷದೊಳಗಿನವರು (ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇರುತ್ತದೆ) ಅರ್ಜಿ ಸಲ್ಲಿಸಬಹುದು. ನೇಮಕಾತಿಯು ಸಾಮಾನ್ಯ ಕನ್ನಡ/ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಠ ಪ್ರಶ್ನೆಪತ್ರಿಕೆಗಳ (Objective MCQs) ಮೂಲಕ ನಡೆಯುತ್ತದೆ. ವಿದ್ಯಾರ್ಹತೆ: ಪಿಯುಸಿ (PUC) ಅಥವಾ 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 38 ವರ್ಷ (ಸಾಮಾನ್ಯ ಅಭ್ಯರ್ಥಿಗಳಿಗೆ), ಪ್ರವರ್ಗ-2A/2B/3A/3B ಗೆ 41 ವರ್ಷ ಮತ್ತು SC/ST/Cat-1 ಅಭ್ಯರ್ಥಿಗಳಿಗೆ 43 ವರ್ಷ. ಪರೀಕ್ಷಾ ಮಾದರಿ: ಪತ್ರಿಕೆ-1: ಕಡ್ಡಾಯ ಕನ್ನಡ ಪರೀಕ್ಷೆ (150 ಅಂಕ - ವಿವರಣಾತ್ಮಕ). ಪತ್ರಿಕೆ-2: ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ (100 ಅಂಕ - 1.5 ಗಂಟೆ). ಪತ್ರಿಕೆ-3: ಸಾಮಾನ್ಯ ಜ್ಞಾನ (100 ಅಂಕ - 1.5 ಗಂಟೆ).