POLICE CONSTABLE

 ಕರ್ನಾಟಕ ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್ ನೇಮಕಾತಿಯ ಸಂಪೂರ್ಣ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಆಗಾಗ ಅಗತ್ಯ ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌, ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌, ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳನ್ನು ನೇರ ನೇಮಕಾತಿ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇಂದಿನ ಲೇಖನದಲ್ಲಿ ಸಿವಿಲ್‌ ಪಿಸಿ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ.

ಕರ್ನಾಟಕ ಪೊಲೀಸ್ ಇಲಾಖೆಯು ಈ ವಾರದಲ್ಲಿ 1500 ಸಿಬ್ಬಂದಿ ನೇಮಕಾತಿಗೆ ಅಧಿಸೂಚಿಸುವ ನಿರೀಕ್ಷೆ ಇದೆ. ಯಾವ ಹುದ್ದೆ, ಎಷ್ಟು ಹುದ್ದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಹಾಗೂ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ನಿರೀಕ್ಷೆ ಇದೆ. ರಾಜ್ಯದ ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಪಿಯುಸಿ ಪಾಸಾದವರು, ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೆ ಪದವಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ಸದ್ಯದಲ್ಲೇ ಈ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯುವ ಹಿನ್ನೆಲೆಯಲ್ಲಿ ಇಂದಿನ ಲೇಖನದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿ ಪ್ರಕ್ರಿಯೆಯ ಕಂಪ್ಲೀಟ್‌ ಡೀಟೇಲ್ಸ್‌ ಅನ್ನು ಇಲ್ಲಿ ತಿಳಿಸಲಾಗಿದೆ.

ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮೊದಲು 100 ಅಂಕಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಮಲ್ಟಿಪಲ್‌ಚಾಯ್ಸ್‌ ಪ್ರಶ್ನೋತ್ತರ ಪರೀಕ್ಷೆ ಇದು.

ಲಿಖಿತ ಪರೀಕ್ಷೆ ಪಠ್ಯಕ್ರಮ 

ಲಿಖಿತ ಪರೀಕ್ಷೆಯಲ್ಲಿ 1:5 ರ ಅನುಪಾತದಡಿ ಒಟ್ಟು ಹುದ್ದೆಗೆ ಅರ್ಹಗೊಂಡ ಅಭ್ಯರ್ಥಿಗಳಿಗೆ PET, PST ಟೆಸ್ಟ್‌ ಇರುತ್ತದೆ.

ಮೊದಲು ದೇಹದಾರ್ಢ್ಯತೆ ಪರೀಕ್ಷೆ ನಡೆಸಿ (PST), ಇದರಲ್ಲಿ ಅರ್ಹರಾದವರಿಗೆ ಸಹಿಷ್ಣುತೆ ಪರೀಕ್ಷೆ (PET) ನಡೆಸಲಾಗುತ್ತದೆ.

ನಂತರ ತಾತ್ಕಾಲಿಕ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗುತ್ತದೆ.

100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ಸರಿ ಉತ್ತರಕ್ಕೆ 1 ನೀಡಲಾಗುತ್ತದೆ. ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಶೇಕಡ.30 ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸುವ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ. ಈ ಪರೀಕ್ಷೆ ಬರೆದವರನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ ಹುದ್ದೆ ಸಂಖ್ಯೆಗೆ ಅನುಗುಣವಾಗಿ 1:5 ಅಭ್ಯರ್ಥಿಗಳನ್ನು ದೇಹದಾರ್ಢ್ಯತೆ ಪರೀಕ್ಷೆಗೆ ಕರೆಯಲಾಗುತ್ತದೆ.

 ದೇಹದಾರ್ಢ್ಯತೆ ಪರೀಕ್ಷೆ ವಿಧಾನ

ಎಲ್ಲಾ ಸಾಮಾನ್ಯ ಪುರುಷ ಮತ್ತು ತೃತೀಯ ಲಿಂಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ - 168 ಸೆಂ.ಮೀ. ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ ಕನಿಷ್ಠ ವಿಸ್ತರಣೆ 5 ಸೆಂ.ಮೀ)

ಮಹಿಳಾ ಮತ್ತು ತೃತೀಯ ಲಿಂಗ ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 157 ಸೆಂ.ಮೀ ಎತ್ತರ, ಕನಿಷ್ಠ ತೂಕ 45 ಕೆ.ಜಿ ನಿಗಧಿಪಡಿಸಲಾಗಿರುತ್ತದೆ.

ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ - 155 ಸೆಂ.ಮೀ. ಎದೆ ಸುತ್ತಳತೆ 5 ಸೆಂ.ಮೀ.ಗಳ ಕನಿಷ್ಠ ವಿಸ್ತರಿಸುವುದರೊಂದಿಗೆ ಸಂಪೂರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇಲ್ಲದಂತೆ.

ಸಹಿಷ್ಣುತೆ ಪರೀಕ್ಷೆ ಹೇಗಿರುತ್ತದೆ?

ಸಹಿಷ್ಣುತೆ ಪರೀಕ್ಷೆ ಹೇಗಿರುತ್ತದೆ? 

ಎಲ್ಲಾ ಸಾಮಾನ್ಯ ಪುರುಷ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ ಈ ಕೆಳಗಿನಂತೆ ಇರುತ್ತದೆ.

1600 ಮೀಟರ್ ಓಟ : 6 ನಿಮಿಷ 30 ಸೆಕೆಂಡ್.

ಎತ್ತರ ಜಿಗಿತ : 1.20 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಉದ್ದ ಜಿಗಿತ : 3.80 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಗುಂಡು ಎಸೆತ (7.26 KG) : 5.60 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಮಹಿಳಾ ಮತ್ತು ತೃತೀಯ ಲಿಂಗ್ ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ ಮಾದರಿ

400 ಮೀಟರ್ ಓಟ : 2 ನಿಮಿಷಕ್ಕಿಂತ ಮೀರದಂತೆ.

ಎತ್ತರ ಜಿಗಿತ : 0.90 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಉದ್ದ ಜಿಗಿತ : 2.50 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಗುಂಡು ಎಸೆತ (4 KG) : 3.75 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಈ ಮೇಲಿನ ಎಲ್ಲ ಪರೀಕ್ಷೆಗೆ 3 ಅವಕಾಶಗಳು ಇರುತ್ತವೆ.

ಅರಣ್ಯ ಪ್ರದೇಶಗಳ ಬುಡಕಟ್ಟು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 150 ಸೆಂ.ಮೀಟರ್ ನಿಗದಿಯಾಗಿದೆ.

ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಕೆಳಗಿನ ಸಹಿಷ್ಣುತಾ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.

ಲಿಖಿತ ಪರೀಕ್ಷೆ ನಂತರ ನಡೆಸಲಾಗುವ ಸಹಿಷ್ಣುತೆ ಪರೀಕ್ಷೆ ಹಾಗೂ ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳಲ್ಲಿ, ಅಧಿಸೂಚಿಸಲಾದ ಹುದ್ದೆಗಳನುಸಾರ ಮೆರಿಟ್ ಹಾಗೂ ಮೀಸಲಾತಿಗನುಗುಣವಾಗಿ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ತಾತ್ಕಾಲಿಕ ಆಯ್ಕೆಪಟ್ಟಿಯ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗಳು ಕೆಳಗಿನಂತಿವೆ.

ಶ್ರವಣ ಶಕ್ತಿ: ರಿನ್ನೇಸ್ ಪರೀಕ್ಷೆ, ವೆಬ್ಬರ್ ಪರೀಕ್ಷೆ, ವೆರ್ಟಿಗೋ ಪರೀಕ್ಷೆ.

ಆಯ್ಕೆಯಾದ ಅಭ್ಯರ್ಥಿಗಳು ಡಿಜಿ, ಐಜಿಪಿ ರವರು ನಿಯೋಜಿಸಿದ ಪೊಲೀಸ್ ತರಬೇತಿ ಶಾಲೆಗಳಲ್ಲಿ ಮೂಲ ತರಬೇತಿಯನ್ನು ಪಡೆಯಬೇಕು. ಇಲ್ಲಿ ನಿಗಧಿಪಡಿಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ಸೇವೆಯಿಂದ ವಜಾಗೊಳಿಸಲಾಗುವುದು.

ಖಾಯಂ ಪೂರ್ವ ಅವಧಿ 2 ವರ್ಷ, 6 ತಿಂಗಳು.

ವೇತನ ಶ್ರೇಣಿ : ರೂ.23500 - 47650.

ದೃಷ್ಟಿ: ದೂರದ ದೃಷ್ಟಿ, ಸಮೀಪದ ದೃಷ್ಟಿ ಪರೀಕ್ಷೆ.

ಅಪಧಮನಿ ಊತ ಸಹ ಅನರ್ಹತೆ.

ಮಾತಿನಲ್ಲಿ ಅಡಚಣೆ ಸಹ ಅನರ್ಹತೆ.

ಎದೆಯ ಕ್ಷ-ಕಿರಣವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುವುದು.

ಈ ಮೇಲಿನ ವೈದ್ಯಕೀಯ ಪರೀಕ್ಷೆ ವರದಿಯನ್ನಾದರಿಸಿ ಪೊಲೀಸ್ ಇಲಾಖೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.



Comments

Popular posts from this blog

SSC

FDA

Civil Constable